User:Yogi/ಲಿಬ್ರೆ ಆಪೀಸ್ ರೈಟರ್ ಕಲಿಯಿರಿ

From Open Educational Resources
< User:Yogi
Revision as of 15:40, 14 March 2017 by Yogi (talk | contribs) (Created page with "==ಪರಿಚಯ== ಲಿಬ್ರೆ ಆಪೀಸ್ ರೈಟರ್ ಎಂಬುದು ಲಿಬ್ರೆ ಆಪೀಸ್ ಸಾಪ್ಟ್‌ವೇರ್ ಪ್ಯಾಕ...")
(diff) ← Older revision | Latest revision (diff) | Newer revision → (diff)
Jump to navigation Jump to search

ಪರಿಚಯ

ಲಿಬ್ರೆ ಆಪೀಸ್ ರೈಟರ್ ಎಂಬುದು ಲಿಬ್ರೆ ಆಪೀಸ್ ಸಾಪ್ಟ್‌ವೇರ್ ಪ್ಯಾಕೇಜಿನ ಸ್ವತಂತ್ರ ಮತ್ತು ಮುಕ್ತ ವರ್ಡ್‌ ಪ್ರೊಸೆಸರ್ ಆಗಿದೆ ಹಾಗು ಇದು OpenOffice.org ನ ಭಾಗವಾಗಿದೆ. ಮೈಕ್ರೋಸಾಪ್ಟ್‌ ವರ್ಡ್‌ನ ರೀತಿಯ ಕೆಲವು ವೈಶಿಷ್ಟಯಗಳನ್ನು ಹೊಂದಿರುವ ವರ್ಡ್‌ಪ್ರೊಸೆಸರ್ ಇದು.

ಐ.ಸಿ.ಟಿ ಸಾಮರ್ಥ್ಯ

ಲಿಬ್ರೆ ಆಪೀಸ್ ರೈಟರ್ ಎಂಬುದು ದಾಖಲೆಗಳನ್ನು ಸೃಷ್ಟಿಸಲು, ತಿದ್ದಲು ಮತ್ತು ಮುದ್ರಿಸಲು ಉಪಯೋಗಿಸುವ ಒಂದು ವಿಧವಾದ ಆಪ್ಲಿಕೇಶನ್ ಸಾಫ್ಟ್ ವೇರ್. ಇದನ್ನು ಉಪಯೋಗಿಸಿ ಸೃಷ್ಟಿಸಬಹುದಾದ ಹಲವು ರೀತಿಯದಾಖಲೆಗಳೆಂದರೆ - ಪತ್ರಗಳು, ವರದಿಗಳು, ಮೆಮೋಗಳು ಮತ್ತು ಇತರೆ ವೈಯಕ್ತಿಕ , ವ್ಯಾವಹಾರಿಕ ಮತ್ತು ವೃತ್ತಿಗತ ದಾಖಲೆಗಳು. ಇದನ್ನು ಪಠ್ಯವನ್ನು ಫಾರ್ಮೆಟ್ ಮಾಡಲು, ಕಾಗುಣಿತವನ್ನು ಪರೀಕ್ಷಿಸಲು, ಟೇಬಲ್‌ಗಳನ್ನು ಸೇರಿಸಲು ಮತ್ತು ಸೂಕ್ತವಾದ ಚಿತ್ರಗಳನ್ನು ಸೇರಿಸಲು ಸಹ ಉಪಯೋಗಿಸಬಹುದು.

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಲಿಬ್ರೆ ಆಪೀಸ್ ರೈಟರ್ ಶೈಕ್ಷಣಿಕವಾಗಿ ಬಳಸಲು ಸ್ವತಂತ್ರ ಮತ್ತು ಮುಕ್ತವಾಗಿದೆ. ಮೈಕ್ರೋಸಾಪ್ಟ್‌ಗೆ ಹೋಲಿಸಿದಲ್ಲಿ ಇದು ಪರ್ಯಾಯ ಅನ್ವಯಕವಾಗಿ ವಿಧ್ಯಾರ್ಥಿಗಳಿಗೆ ಬಳಕೆಯಾಗುತ್ತದೆ.

ಆವೃತ್ತಿ

"Fresh" version: 5.3.0 (1 February 2017)
"Still" version: 5.2.5 (26 January 2017)
(ಲಿಬ್ರೆ ಆಪೀಸ್ ರೈಟರ್ ವಿಂಡೋಷ್ ಮತ್ತು ಮ್ಯಾಕ್‌ ನಲ್ಲಿಯೂ ದೊರೆಯುತ್ತದೆ)

ಸಂರಚನೆ

ಇದು ಉಬುಂಟು ತಂತ್ರಾಂಶದ ಭಾಗವಾಗಿದ್ದು, ಪ್ರತ್ಯೇಕವಾದ ಯಾವುದೇ ಸಂರಚನೆಯ ಅವಶ್ಯಕತೆ ಹೊಂದಿರುವುದಿಲ್ಲ. ಇದಲ್ಲದೇ ಹಲವು ಹೆಚ್ಚುವರಿ ಅಂಶಗಳನ್ನು ಬಳಸಬಹುದಾಗಿದೆ.

ಲಕ್ಷಣಗಳ ಮೇಲ್ನೋಟ

ಲಿಬ್ರೆ ಆಪೀಸ್ ರೈಟರ್ ನಲ್ಲಿ ಗ್ರಾಫಿಕ್, ಕೋಷ್ಟಕ, ಚಾರ್ಟ್‌ ಮುಂತಾದವುಗಳನ್ನೊಳಗೊಂಡ ಪಠ್ಯ ದಾಖಲೆಗಳನ್ನು ರಚಿಸಲು ಹಾಗು ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ. ಅದೇ ರೀತಿ ದಾಖಲೆಗಳನ್ನು ಓಪನ್ ಡಾಕ್ಯುಮೆಂಟ್‌ ಪಾರ್ಮಾಟ್ (ODF), ಮೈಕ್ರೋಸಾಪ್ಟ್ ವರ್ಡ್ (.doc), HTML ನಂತಹ ವಿವಿಧ ನಮೂನೆಗಳಲ್ಲಿ ಉಳಿಸಿಕೊಳ್ಳಬಹುದು. ಹಾಗು ಸುಲಭವಾಗಿ ನಿಮ್ಮದಾಖಲೆಯನ್ನು ಪಿಡಿಎಪ್ ಗೆ ವರ್ಗಾಯಿಸಬಹುದು.

ಇತರೇ ಸಮಾನ ಅನ್ವಯಕಗಳು

ಮೈಕ್ರೋಸಾಪ್ಟ್ ವರ್ಡ್, ಓಪನ್ ಆಪೀಸ್ ರೈಟರ್, ವೆಬ್‌ ಆಧಾರಿತ ಪಠ್ಯ ಸಂಪಾದನೆ ಮುಂತಾದವುಗಳು.

ಅಭಿವೃದ್ದಿ ಮತ್ತು ಸಮುದಾಯ ಸಹಾಯ

Developer(s) -The Document Foundation
ಸಮುದಾಯ ಸಹಾಯ

ಅನ್ವಯಕ ಬಳಕೆ

ಕಾರ್ಯಕಾರಿತ್ವ









ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಕಡತದ ಹೆಸರಿನಲ್ಲಿ ದಿನಾಂಕವನ್ನು ನಮೂದಿಸುವುದು ಸಹ ಬಹಳ ಉಪಯುಕ್ತವಾಗುತ್ತದೆ. ಇದು .ODT ನಮೂನೆಯಲ್ಲಿ ಉಳಿಯುತ್ತದೆ. .ODT ಅಂದರೆ ಓಪನ್ ಡಾಕ್ಯುಮೆಂಟ್ ಟೆಕ್ಸ್ಟ್ ಎಂದು ಅರ್ಥ. ಇದು ಮುಕ್ತ ತಂತ್ರಾಂಶಗಳ ಭಾರತ ಸರ್ಕಾರದ ನೀತಿಯಿಂದ ಶಿಫಾರಸ್ಸುಗೊಂಡಿದೆ. .docx ಎಂಬುದು ಮೈಕ್ರೋಸಾಪ್ಟ್‌ನ ನಮೂನೆಯಾಗಿದ್ದು ಇದು ಮುಕ್ತವಾಗಿರುವುದಿಲ್ಲ ಹಾಗು ಇದು ಭಾರತ ಸರ್ಕಾರದಿಂದ ಶಿಫಾರಸ್ಸುಗೊಂಡಿರುವುದಿಲ್ಲ.

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಪಿಡಿಎಪ್ ಗೆ ಎಕ್ಸ್‌ಪೋರ್ಟ್‌ ಮಾಡಬಹುದು. ಇದು ನೀವು ಯಾವುದೇ ರೀತಿಯ ಬದಲಾವಣೆ ಮಾಡದೇ ಕೇವಲ ಮುದ್ರಿಸುವ ಸಲುವಾಗಿ ಬಳಕೆಯಾಗುತ್ತದೆ. Export as pdf.png

ಉನ್ನತೀಕರಿಸಿದ ಲಕ್ಷಣಗಳು

  1. ಬರವಣಿಗೆ
  2. ವಿನ್ಯಾಸ ಮತ್ತು ಸಂರಚನೆ
  3. ಡೆಸ್ಕಟಾಪ್ ಪ್ರಕಟಣೆ
  4. ಲೆಕ್ಕಾಚಾರ
  5. ಡ್ರಾಯಿಂಗ್ ರಚನೆ
  6. ಗ್ರಾಫಿಕ್ ಸೇರಿಸುವುದು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ Search Libreoffice
ಟರ್ಮಿನಲ್‌ನಿಂದ sudo apt-get install libreoffice
ವೆಬ್‌ಪುಟದಿಂದ Go to libreoffice.org and download files to install
ವೆಬ್‌ಆಧಾರಿತ ನೊಂದಣಿ Not Applicable

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಅಂಡ್ರಾಯಿಡ್‌ ಮೊಬೈಲ್‌ ನಲ್ಲಿ ಈ ಅನ್ವಯಕವನ್ನು ಓಪನ್ ಡಾಕ್ಯುಮೆಂಟ್ ವ್ಯೂವರ್ ಮತ್ತು WPS ಆಪೀಸ್ ಮೂಲಕ ಬಳಸಬಹುದು.

ಸಂಪನ್ಮೂಲ ರಚನೆಯ ಆಲೋಚನೆಗಳು

ಪಠ್ಯ ಸಂಪನ್ಮೂಲಗಳನ್ನು ರಚಿಸಲು ಮತ್ತು ತಿದ್ದುಪಡಿ ಮಾಡಲು ಈ ಅನ್ವಯಕವನ್ನು ಬಳಸಬಹುದು. ಇದರಲ್ಲಿ ಚಿತ್ರಗಳನ್ನು, ವೆಬ್‌ಲಿಂಕ್‌ಗಳನ್ನು, ಹೈಪರ್‌ಲಿಂಕ್‌ಗಳನ್ನು ಸೇರಿಸಬಹುದು. ಕೋಷ್ಟಕಗಳನ್ನು ಸೇರಿಸಬಹುದು, ಪರಿವಿಡಿ ರಚಿಸಬಹುದು ಹಾಗು ಪಠ್ಯ ದಾಖಲೆಯನ್ನು ರಚಿಸಲು ಹಲವು ರೀತಿಯಲ್ಲಿ ಬಳಸಬಹುದಾಗಿದೆ.

ಆಕರಗಳು

  1. ಲಿಬ್ರೆ ಆಪೀಸ್ ಪುಟ
  2. ವಿಕಿಪೀಡಿಯ